ಇಂದು ಬೆಂಗಳೂರಿನ ಹಲವೆಡೆ ಕರೆಂಟ್ ಕಟ್..! ಯಾವ, ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ.?

ಜೂನ್ 29, 2025 - 09:08
ಜೂನ್ 28, 2025 - 16:12
 0  15
ಇಂದು ಬೆಂಗಳೂರಿನ ಹಲವೆಡೆ ಕರೆಂಟ್ ಕಟ್..! ಯಾವ, ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ.?

ಬೆಂಗಳೂರು: ಇಂದು ಭಾನುವಾರಮನೆಯಲ್ಲಿ ಆರಾಮಾಗಿ ಇರಬೇಕು ಅಂತ ನೀವು ಅಂದುಕೊಂಡಿದ್ರೆ ಸ್ವಲ್ಪ ಹುಷಾರಾಗಿರಿ. ಅದರಲ್ಲೂ ಏರಿಯಾದ ನಿವಾಸಿಗಳು ನೀವಾಗಿದ್ರೆ ಇಂದು ಬೆಸ್ಕಾಂನವರಿಗೆ ಹಿಡಿಶಾಪ ಹಾಕುತ್ತಿರಿ. ಬೆಸ್ಕಾಂ ಹೆಲ್ಪ್ಲೈನ್ ನಂಬರ್ಗೆ ಎಷ್ಟೇ ಕಾಲ್ ಮಾಡಿದ್ರೂ ಪ್ರಯೋಜನ ಆಗಲ್ಲ. ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದ್ದು, ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಹೌದು ಬೆಸ್ಕಾಂ ನೀಡಿರುವ ಮಾಹಿತಿ ಪ್ರಕಾರ, ಶೇಷಾದ್ರಿ ರಸ್ತೆ, ಕುರುಬರ ಸಂಘದ ವೃತ್ತ 1ನೇ ಮುಖ್ಯರಸ್ತೆ, ಗಾಂಧಿ ನಗರ 1ನೇ ಕ್ರಾಸ್ ಮತ್ತು 2ನೇ ಕ್ರಾಸ್ ಭಾಗಗಳು, ಕ್ರೆಸೆಂಟ್ ರಸ್ತೆ, ಶೇಷಾದ್ರಿಪುರಂ, ವಿನಾಯಕ ವೃತ್ತ, ಕೆಂಪೇಗೌಡ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಸುಬೇದಾರ್ ಛತ್ರಂ ರಸ್ತೆ, ಲಕ್ಷ್ಮಣಪುರಿ ಸ್ಲಂ ಏರಿಯಾ, ಕಬ್ಬನ್ಪೇಟೆ, ಚಲುಕೂರ್ಪೇಟೆ, ಚಲುಕೂರ್ಪೇಟೆ, ಸಿ.ಸಿ. ಹೈಗ್ರೌಂಡ್ಸ್, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ಬೆಳಗ್ಗೆ 10 ರಿಂದ ಸಂಜೆ 5 ವರೆಗೆ ವಿದ್ಯುತ್ ಕಡಿತ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಸಮಯದಲ್ಲಿ ತುಸು ಬದಲಾವಣೆ ಇರಬಹುದು. ನಿಗದಿತ ತ್ರೈಮಾಸಿಕ ನಿರ್ವಹಣಾ ಕಾರ್ಯಗಳು ಮತ್ತು ನಿರ್ವಹಣಾ ಕಾಮಗಾರಿಯ ಕಾರಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ಇದು 66/11 ಕಿಲೋವೋಲ್ಟ್ (ಕೆವಿ) ಸ್ಟೇಷನ್ ಅಡಿಯಲ್ಲಿ ಬರುವ ಪ್ರದೇಶಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow