ಕಲರ್ಸ್ ನಲ್ಲಿ ಗೌತಮಿ ಮಿಂಚಿಂಗ್... ಭಾರ್ಗವಿ LLB ಸೀರಿಯಲ್ ನಲ್ಲಿ ಫೈಟಿಂಗ್ ಸೀನ್!

ಮೇ 19, 2025 - 20:33
 0  9
ಕಲರ್ಸ್ ನಲ್ಲಿ ಗೌತಮಿ ಮಿಂಚಿಂಗ್... ಭಾರ್ಗವಿ LLB ಸೀರಿಯಲ್ ನಲ್ಲಿ ಫೈಟಿಂಗ್ ಸೀನ್!

ಸತ್ಯ ಸೀರಿಯಲ್​ ಮೂಲಕ ಸಖತ್ ಫೇಮಸ್​ ಆಗಿದ್ದ ಗೌತಮಿ ಜಾಧವ್ ಅವರು ಇದೀಗ ಕಲರ್ಸ್ ನಲ್ಲಿ ಪ್ರಸಾರ ಆಗುತ್ತಿರುವ ಭಾರ್ಗವಿ LLB ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ. 

ಬಿಗ್​ಬಾಸ್​ನಿಂದ ಆಚೆ ಬಂದ ಬಳಿಕ ನಟಿ ಗೌತಮಿ ಜಾದವ್​ ಯಾವುದೇ ಪ್ರಾಜಕ್ಟ್​ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ನಿರ್ದೇಶಕಿ ಸ್ಪಪ್ನ ಕೃಷ್ಣ ಅವರ ಗರಡಿಯಲ್ಲಿ ಮೂಡಿ ಬರುತ್ತಿರೋ ಸೀರಿಯಲ್​ಗೆ ಸ್ಟಾರ್​ ನಟಿ ಎಂಟ್ರಿ ಕೊಟ್ಟು ಕಮಾಲ್​ ಮಾಡುತ್ತಿದ್ದಾರೆ. 

ಆದ್ರೆ ದಿಢೀರ್ ಅಂತ ಗೌತಮಿ ಜಾಧವ್ ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಸತ್ಯ ಸೀರಿಯಲ್​ನಲ್ಲಿ ಟಾಮ್ ಬಾಯ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ಗೌತಮಿ ಅವರ ಲುಕ್​ ಕೊಂಚ ಬದಲಾಗಿದೆ. ಮೊದಲ ಪ್ರೋಮೋದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದರು. ಸದ್ಯ ಈಗ ನಟಿ ಗೌತಮಿ ‘ಭಾರ್ಗವಿ LL.B’ ಧಾರಾವಾಹಿ ಕಾಣಿಸಿಕೊಂಡಿದ್ದಾರೆ

ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ ಅವರು ನಟಿಸುತ್ತಿದ್ದಾರೆ. ಇದೇ ಧಾರಾವಾಹಿಯಲ್ಲಿ ಭಾರ್ಗವಿಗೆ ಪ್ರಾಣಾಪಾಯ ಎದುರಾಗಿದ್ದು, ಅವಳನ್ನು ಕಾಪಾಡಲು ಗೌತಮಿ ಜಾಧವ್ ಅವರ ಆಗಮನ ಆಗಿದೆ. ವಿಶೇಷ ಅತಿಥಿ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow