ಕಾರಿನ ಮೇಲೆ ಮಗುಚಿ ಬಿದ್ದ ಟಿಪ್ಪರ್: ಒಂದೇ ಕುಟುಂಬದ 9 ಮಂದಿ ಸಾವು!

ಜೂನ್ 4, 2025 - 21:06
 0  17
ಕಾರಿನ ಮೇಲೆ ಮಗುಚಿ ಬಿದ್ದ ಟಿಪ್ಪರ್: ಒಂದೇ ಕುಟುಂಬದ 9 ಮಂದಿ ಸಾವು!

ಭೋಪಾಲ್:- ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಸಿಮೆಂಟ್ ಸಾಗಿಸಿತ್ತಿದ್ದ ಟಿಪ್ಪರ್ ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ. 

40 ವರ್ಷದ ಮುಖೇಶ್, 35 ವರ್ಷದ ಸಾವ್ಲಿ, 16 ವರ್ಷದ ವಿನೋದ್, 12 ವರ್ಷದ ಪಾಯಲ್ , 38 ವರ್ಷದ ಮಾಧಿ, 14 ವರ್ಷದ ವಿಜಯ್ ಭರು ಬಮಾನಿಯಾ, 14 ವರ್ಷದ ಕಾಂತಾ, 9 ವರ್ಷದ ರಾಗಿಣಿ, ಮತ್ತು ಅಕಾಲಿ ಮೃತರು. ಪಾಯಲ್ ಸೋಮ್ಲಾ (19) ಮತ್ತು ಆಶು (5) ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. 

ಮೇಘನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೆಲಿ ರೈಲ್ವೇ ನಿಲ್ದಾಣದ ಬಳಿ ನಸುಕಿನ ಜಾವ 2:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮುಹುದಾ ಗ್ರಾಮದ ಕುಟುಂಬವು ಮದುವೆ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಜೆಲಿ ರೈಲ್ವೆ ಕ್ರಾಸಿಂಗ್ ಬಳಿ ತಾತ್ಕಾಲಿಕ ರಸ್ತೆಯ ಮೂಲಕ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆಗೆ ಕಡೆ ತಿರುಗುತ್ತಿದ್ದಾಗ ಟಿಪ್ಪರ್ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow