ಫ್ಯಾನ್ಸ್ ಗೆ ಗುಡ್ ನ್ಯೂಸ್: ಮುಂಬೈ ಇಂಡಿಯನ್ಸ್ ನಲ್ಲೇ ಇರಲಿದ್ದಾರೆ ಈ ಸ್ಟಾರ್ ನಾಲ್ವರು ಆಟಗಾರರು!

ಅಕ್ಟೋಬರ್ 18, 2024 - 11:02
 0  13
ಫ್ಯಾನ್ಸ್ ಗೆ ಗುಡ್ ನ್ಯೂಸ್: ಮುಂಬೈ ಇಂಡಿಯನ್ಸ್ ನಲ್ಲೇ ಇರಲಿದ್ದಾರೆ  ಈ ಸ್ಟಾರ್ ನಾಲ್ವರು ಆಟಗಾರರು!

ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ತಂಡದಲ್ಲೇ ಸ್ಟಾರ್ ಆಟಗಾರರು ಇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಿದ್ರೆ ಅವರು ಯಾವ ಆಟಗಾರರು ಎಂಬ ಮಾಹಿತಿ ಇಲ್ಲಿದೆ ನೋಡಿ. 

ಮುಂಬೈ ಇಂಡಿಯನ್ಸ್ ಮುಂದಿನ ಸೀಸನ್​ಗಾಗಿ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ರಿಟೈನ್ ಮಾಡಿಕೊಳ್ಳುವುದು ಕನ್ಫಮ್​ ಎನ್ನಲಾಗಿದೆ. ರೋಹಿತ್ ಶರ್ಮಾ ಅವರನ್ನು ಮೊದಲ ರಿಟೈನ್ ಆಗಿ ಉಳಿಸಿಕೊಳ್ಳಲು ಬಯಸಿದ್ದು, ಹೀಗಾಗಿ ಐಪಿಎಲ್ 2025 ರಲ್ಲೂ ಹಿಟ್​ಮ್ಯಾನ್ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವುದು ಖಚಿತ ಎನ್ನಬಹುದು.

ಹಾಗೆಯೇ ಜಸ್​ಪ್ರೀತ್ ಬುಮ್ರಾ ಕೂಡ ಮುಂಬೈ ಇಂಡಿಯನ್ಸ್ ತಂಡದಲ್ಲೇ ಉಳಿಯಲಿದ್ದಾರೆ. ಬುಮ್ರಾ ಅವರಿಗೂ ಬೃಹತ್ ಮೊತ್ತದ ಸಂಭಾವನೆಯ ಆಫರ್ ನೀಡಲಾಗಿದೆ. ಹೀಗಾಗಿ ಯಾರ್ಕರ್ ಸ್ಪೆಷಲಿಸ್ಟ್ ಕೂಡ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ.

ಇನ್ನು ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಕಳೆದ ಸೀಸನ್​ನಲ್ಲಿ ಪಾಂಡ್ಯ ಮುಂದಾಳತ್ವದಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಇದಾಗ್ಯೂ ಹಾರ್ದಿಕ್ ಪಾಂಡ್ಯರನ್ನು ರಿಟೈನ್ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆ.

ಅದೇ ರೀತಿ ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ಇಂಡಿಯನ್ಸ್ ತಂಡದಲ್ಲೇ ಉಳಿಯಲಿದ್ದಾರೆ. ಟೀಮ್ ಇಂಡಿಯಾ ಟಿ20 ತಂಡದ ನಾಯಕನಿಗೆ ಬೃಹತ್ ಮೊತ್ತದ ಆಫರ್ ನೀಡಲಾಗಿದ್ದು, ಹೀಗಾಗಿ ಸೂರ್ಯಕುಮಾರ್ ಕೂಡ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬರುವುದಿಲ್ಲ ಎಂಬುದು ಖಚಿತವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow