ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಕುಡಿಯೋ ಅಭ್ಯಾಸ ಇದ್ಯಾ? ಹಾಗಿದ್ರೆ ಡೇಂಜರ್, ಮೊದಲು ಈ ಸುದ್ದಿ ನೋಡಿ!

ಬೆಳಿಗ್ಗೆ ಎದ್ದಾಕ್ಷಣ ಬಿಸಿಬಿಸ ಕಾಫಿ ಕುಡಿತಾ ಪೇಪರ್ ಓದೋದು, ಮೊಬೈಲ್ ನೋಡೋದು ಮಾಡ್ತಿದ್ರೆ ಆಹಾ ಅನ್ನಿಸದೇ ಇರದು. ಹಲವರು ಬೆಳಿಗ್ಗೆ ಎದ್ದಾಕ್ಷಣ ಮೊದಲು ಮಾಡುವ ಕೆಲಸ ಕಾಫಿ ಹೀರುವುದು. ಕಾಫಿ ಕುಡಿಯುವುದರಿಂದ ದೇಹ ಮನಸ್ಸಿಗೆ ಚೈತನ್ಯ ಸಿಗುತ್ತದೆ. ಏನೋ ಆಹ್ಲಾದಕರ ಭಾವ ಮೂಡುತ್ತದೆ. ಆದರೆ ಈ ಎಲ್ಲಾ ಅಂಶಗಳನ್ನು ಹೊರತು ಪಡಿಸಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಸಾಕಷ್ಟು ಅಪಾಯಗಳಿವೆ.
ಸಾಮಾನ್ಯವಾಗಿ ಕೆಲವರು ಬೆಡ್ ಕಾಫಿ ಕುಡಿಯುತ್ತಾರೆ. ಇನ್ನು ಕೆಲವರು ಬೆಳಗ್ಗೆ ಎದ್ದು ನಿತ್ಯಕರ್ಮ ಮುಗಿಸಿದ ತಕ್ಷಣ ಕಾಫಿ ಸೇವನೆಗೆ ಮುಂದಾಗುತ್ತಾರೆ. ಆದರೆ ಹೀಗೆ ಬೆಳ್ಳಂಬೆಳಗ್ಗೆ ಕಾಫಿ ಕುಡಿಯುವುದು ನಿಮ್ಮ ಆರೋಗ್ಯ ಹದಗೆಡಿಸಬಹುದು. ಬೆಳಿಗ್ಗೆ ಕಾಫಿ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು ಅಂತಾರೆ ತಜ್ಞರು.
ಕಾಫಿ ಸೇವನೆ ಮಿತವಾಗಿ ಇದ್ದರೆ ಹೃದ್ರೋಗ ತಡೆಯಬಹುದಂತೆ. ಮಧುಮೇಹ ನಿಯಂತ್ರಿಸಬಹುದು, ಅಲ್ಝೈಮರ್ ಕಾಯಿಲೆಯಂತಹ ಗಂಭೀರ ಕಾಯಿಲೆಗಳನ್ನು ತಡೆಗಟ್ಟಬಹುದು ಜೊತೆಗೆ ಕ್ಯಾನ್ಸರ್ ನಿಯಂತ್ರಿಸಬಹುದು ಎಂದು ನಂಬಲಾಗಿದೆ. ಆದರೆ ನೀವು ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ಕಾಫಿ ಕುಡಿಯಬೇಕು ಎಂಬ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ.
ಸಾಮಾನ್ಯವಾಗಿ ಕೆಲವರು ಬೆಡ್ ಕಾಫಿ ಕುಡಿಯುತ್ತಾರೆ. ಇನ್ನು ಕೆಲವರು ಬೆಳಗ್ಗೆ ಎದ್ದು, ನಿತ್ಯಕರ್ಮ ಮುಗಿಸಿದ ತಕ್ಷಣ ಕಾಫಿ ಸೇವನೆಗೆ ಮುಂದಾಗುತ್ತಾರೆ. ಆದರೆ ಹೀಗೆ ಬೆಳ್ಳಂಬೆಳಗ್ಗೆ ಕಾಫಿ ಕುಡಿಯುವುದು ನಿಮ್ಮ ಆರೋಗ್ಯ ಹದಗೆಡಿಸಬಹುದು. ಬೆಳಿಗ್ಗೆ ಕಾಫಿ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು ಅಂತಾರೆ ತಜ್ಞರು.
ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಜೀರ್ಣಕ್ರಿಯೆ ಸಮಸ್ಯೆ, ರಕ್ತದ ಸಕ್ಕರೆ ಹೆಚ್ಚಳ, ಒತ್ತಡ ಮಟ್ಟ ಮತ್ತು ಇತರ ಸಮಸ್ಯೆಗೆ ಕಾರಣವಾಗಬಹುದು. ಈ ವೇಳೆ ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಈಗಾಗಲೇ ಹೆಚ್ಚಿರುತ್ತದೆ. ಮತ್ತು ಕಾಫಿ ಕುಡಿದಾಗ ಒತ್ತಡದ ಹಾರ್ಮೋನ್ಗಳ ಮಟ್ಟ ಹೆಚ್ಚುವ ಸಾಧ್ಯತೆಯಿದೆ.
ನಂತರ ಇದು ಮೂಡ್ ಸ್ವಿಂಗ್ ಗೆ ಕಾರಣವಾಗಬಹುದು. ಏಕೆಂದರೆ ಬೆಳಿಗ್ಗೆ ಚಹಾ ಅಥವಾ ಕಾಫಿ ಸೇವನೆ ಅತ್ಯಂತ ಕೆಟ್ಟ ಸಮಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕಾಫಿ ಹೊಟ್ಟೆಯಲ್ಲಿ ಆಮ್ಲದ ಉತ್ಪಾದನೆ ಉತ್ತೇಜಿಸುತ್ತದೆ. ಹೊಟ್ಟೆಯ ಆಮ್ಲದ ಹೆಚ್ಚಿದ ಉತ್ಪಾದನೆ ದೇಹದ ಜೀರ್ಣಾಂಗ ವ್ಯವಸ್ಥೆ ಮೇಲೆ ತೀವ್ರ ಅಡಚಣೆ ಉಂಟು ಮಾಡುತ್ತದೆ. ಇದು ಅಜೀರ್ಣ, ಹೊಟ್ಟೆ ಉಬ್ಬುವುದು, ವಾಕರಿಕೆ ಮುಂತಾದ ಸಮಸ್ಯೆಗೆ ಕಾರಣ ಆಗುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ಇದು ಕಾರ್ಟಿಸೋಲ್ ಅನ್ನು ಹೆಚ್ಚಿಸುತ್ತದೆ. ಇದು ಅಂಡೋತ್ಪತ್ತಿ, ತೂಕ ಮತ್ತು ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಮುಂಜಾನೆ ಈ ಹಾರ್ಮೋನ್ ಅನ್ನು ಹೆಚ್ಚಿಸುವುದು ನಿಮ್ಮ ಶಕ್ತಿಯ ಮಟ್ಟ ಕಡಿಮೆ ಮಾಡುತ್ತದೆ ಮತ್ತು ನಿಮಗೆ ಕಿರಿಕಿರಿ ಭಾವನೆ ಉಂಟು ಮಾಡುತ್ತದೆ.
ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಮೊದಲು ಸೇವಿಸಿದರೆ, ಅದು ನಿಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ನೀವು ಮಧುಮೇಹಿಗಳಾಗಿದ್ದರೆ ಈ ರೂಢಿ ತಪ್ಪಿಸಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ ನರ ಮತ್ತು ನಡುಗುವಿಕೆ ಉಂಟು ಮಾಡುತ್ತದೆ. ಇದು ಮೂಡ್ ಸ್ವಿಂಗ್ಗಳ ಅಪಾಯದ ಮುನ್ಸೂಚನೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?






