ಭವ್ಯಗೌಡ ಪ್ರೀತಿಯಲ್ಲಿ ಬಿದ್ದ ತ್ರಿವಿಕ್ರಮ್! ಸೀರಿಯಸ್ಲಿ ಲವ್ ಯೂ ಎಂದ ನಟ!

ಡಿಸೆಂಬರ್ 24, 2024 - 20:08
 0  20
ಭವ್ಯಗೌಡ ಪ್ರೀತಿಯಲ್ಲಿ ಬಿದ್ದ ತ್ರಿವಿಕ್ರಮ್! ಸೀರಿಯಸ್ಲಿ ಲವ್ ಯೂ ಎಂದ ನಟ!

ಬಿಗ್ ಬಾಸ್ ಸೀಸನ್ 11, 13ನೇ ವಾರಕ್ಕೆ ಕಾಲಿಟ್ಟಿದ್ದು, ಇನ್ನೇನು ಫಿನಾಲೆ ಬಿಸಿ ಸ್ಪರ್ಧಿಗಳಿಗೆ ಮುಟ್ಟಲಿದೆ ಅನ್ನೊಷ್ಟರಲ್ಲಿ ಬಾದ್ ಶಾ ಕಿಚ್ಚ ಸುದೀಪ್ ಟಫ್ ಸ್ಪರ್ಧಿ ತ್ರಿವಿಕ್ರಮ್‌ಗೆ ಬುದ್ಧಿ ಕಲಿಸಿದ್ದಾರೆ. ಈ ವಾರ ತಂಡದ ನಾಯಕನಾಗಿದ್ದ ತ್ರಿವಿಕ್ರಮ್ ತಮ್ಮ ತಂಡ ಮಾಡಿದ ತಪ್ಪನ್ನ ತನ್ನ ಮೇಲೆ ಹಾಕಿಕೊಂಡು ಸೆಲ್ಫ್ ನಾಮಿನೇಟ್ ಮಾಡಿಕೊಳ್ಳುತ್ತಾರೆ. ಭವ್ಯಾ ಗೌಡ ಮತ್ತು ರಜತ್ ಎಷ್ಟೇ ಬುದ್ಧಿ ಹೇಳಿದರೂ ತ್ರಿವಿಕ್ರಮ್ ಕೇರ್ ಮಾಡಲಿಲ್ಲ ಹೀಗಾಗಿ ವೀಕೆಂಡ್ ಕಾರ್ಯಕ್ರಮದಲ್ಲಿ ಸುದೀಪ್ ಸರಿಯಾಗಿ ಬುದ್ಧಿ ಕಲಿಸಿದ್ದಾರೆ ಅಂತಿದ್ದಾರೆ ವೀಕ್ಷಕರು. 

ಈ ಮಧ್ಯೆ ಭವ್ಯಗೆ ತ್ರಿವಿಕ್ರಮ್ ಪ್ರಪೋಸ್ ಮಾಡಿದ್ದಾರೆ. ಬಿಗ್‌ಬಾಸ್‌ ಕನ್ನಡ 11ರಲ್ಲಿ ಭವ್ಯಾ ಗೌಡ ಮತ್ತು ತ್ರಿವಿಕ್ರಮ್‌ ನಡುವಿನ ಸ್ನೇಹಕ್ಕಿಂತ ಹೆಚ್ಚಿನ ಬಾಂಧವ್ಯವಿದೆ. ಡಿಸೆಂಬರ್ 20ರ ಎಪಿಸೋಡ್‌ನಲ್ಲಿ ಬಿಗ್‌ ಬಾಸ್‌ ಸ್ಪರ್ಧಿ ತ್ರಿವಿಕ್ರಮ್‌, ಭವ್ಯಾಗೆ 'ಐ ಲವ್ ಯೂ' ಎಂದು ಹೇಳಿದ್ದಾರೆ. ಇಬ್ಬರ ನಡುವಿನ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚರ್ಚೆಗೆ ಕಾರಣವಾಗಿದೆ. ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಸ್ಪರ್ಧಿಗಳು ಅನ್ನುವುದಕ್ಕಿಂತ ಉತ್ತಮ ಬಾಂಧವ್ಯ ಹೊಂದಿದ್ದು, ಕ್ಲೋಸ್‌ ಆಗಿ ಮಾತನಾಡುತ್ತಾರೆ.

ಈ ಹಿಂದೆ ಬಿಗ್‌ಬಾಸ್ ಮಿನಿ ಸೀಸನ್‌ನಲ್ಲಿ ಭಾಗವಹಿಸಿದ್ದರು. ಅವಾಗಿನಿಂದಲೇ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಅವರಿಬ್ಬರು ಪರಸ್ಪರ ಪರಿಚಯ. ಬಿಗ್‌ ಬಾಸ್‌ ಸೀಸನ್‌ 11 ರ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಮೊದಲೇ ಪರಿಚಯ ಒಂದೆರಡು ಬಾರಿ ಸಿಕ್ಕಾಗ ಹಾಯ್ ಎಂದು ಹೇಳಿದ್ದಷ್ಟೇ ಎಂದು ಸುದೀಪ್‌ ಬಳಿ ಹೇಳಿದ್ದರು.

ಬಿಗ್‌ ಬಾಸ್‌ ಮನೆಯಲ್ಲಿ ಭವ್ಯ ಜೊತೆಗೆ ತ್ರಿವಿಕ್ರಮ್‌ ಮಾತನಾಡುವ ವೇಳೆ ತ್ರಿವಿಕ್ರಮ್‌ ರಿಯಲೀ ಲವ್‌ ಯೂ ಭವ್ಯಾ ಎಂದಿದ್ದಾರೆ. ಭವ್ಯ ಗೌಡ ಹಾಗೂ ತ್ರಿವಿಕ್ರಮ್‌ ಬಿಗ್‌ ಬಾಸ್‌ ಮನೆಗೆ ಬರುವ ಮುನ್ನವೇ ಅವರಿಬ್ಬರ ಮಧ್ಯೆ ಗೆಳತನಕ್ಕೆ ಮೀರಿದ ಬಂಧ ಇತ್ತು ಎನ್ನಲಾಗಿದೆ. ಬಿಗ್‌ಬಾಸ್‌ ಮನೆಯಲ್ಲಿ ಮಾತ್ರ ಸ್ಪರ್ಧಿಗಳಂತೆ ಇಬ್ಬರೂ ವೈಯಕ್ತಿಕ ಆಟ ಆಡುತ್ತಿದ್ದಾರೆ. 

ನಾವು ಲಕ್ಷುರಿ ಟಾಸ್ಕ್‌ನಲ್ಲಿ ಎಷ್ಟು ಪಾಯಿಂಟ್‌ ಸೋತೆವೆಂದು ಹೇಳಲಷ್ಟೇ ನಿಂಗೆ ಹೇಳಿಕೊಡೋಕೆ ಬಂದಿದ್ದು. ನಾನು ನಿನಗೆ ಬೈಯಲು ಆಗ್ಲಿ, ಹೊರಗಡೆ ಆಗ್ಲಿ ಇಲ್ಲಿ ಆಗ್ಲಿ ಬಂದಿಲ್ಲ ಎಂದು ತ್ರಿವಿಕ್ರಮ್‌ ಹೇಳಿದ್ದಾರೆ. ಈ ವೇಳೆ ಭವ್ಯಾ ಗೌಡ ಅವರು ಮಾತನಾಡಿ, ನಾನು ಅದನ್ನೇ ಹೇಳಲು ಬಂದೆ. ಮಾತಾಡಿ ಅಂತಾನೆ ಹೇಳಿದ್ದು, ನಾನು ಎಲ್ಲರತ್ರ ಯಾವ ಟೋನ್‌ನಲ್ಲಿ ಮಾತಾಡಬೇಕು. ಅದನ್ನು ಹೇಳಿಕೊಡಿ ಎಂದು ಹೇಳಿದ್ದಾರೆ. ನೀನು ಎಲ್ಲಾರೂ ಅಂತಿದ್ದೀಯಲ್ಲ. ಎಲ್ಲರೂ ನಿನ್ನ ಜೊತೆಗಿದ್ರಾ ಇಷ್ಟು ದಿನ? ಎಂದು ತ್ರಿವಿಕ್ರಮ್‌ ಅವರು ಪ್ರಶ್ನೆ ಮಾಡಿದ್ದಾರೆ. 

ಇನ್ನೂ ಈ ವೇಳೆ ಭವ್ಯಾ, ಹಂಗಲ್ಲಾ ವಿಕ್ಕಿ, ಎಲ್ಲಾ ವಿಚಾರಕ್ಕೂ ನನ್ನ ಮೇಲೆ ಅಫೆಂಡ್‌ ಆಗ್ತೀದ್ದೀರಾ ಯಾಕೆ? ನಾನು ಏನು ಮಾಡಬೇಕು ಎಂದು ಕೇಳಿದ್ದಾರೆ. ಈ ವೇಳೆ ತ್ರಿ ವಿಕ್ರಮ್‌, ನಾನು ಯಾವ ವಿಚಾರಕ್ಕೆ ಅಫೆಂಡ್‌ ಆದೆ ಭವ್ಯಾ, ಐ ಸೀರಿಯಸ್ಲಿ ಲವ್‌ ಯೂ ಓಕೆ. ವೈಟ್‌ ಕೇಳಿಸಿಕೋ, ನಾನು ನಿಂಗೆ ಅಫೆಂಡ್‌ ಆಗಿ ಆಗ್ಲಿ, ಕೋಪದಲ್ಲಾಗ್ಲಿ, ನಾನು ಏನೂ ಮಾತಾಡ್ತಿಲ್ಲ. ನಾನು ಜಸ್ಟ್ ಕನ್ವಿನ್‌ಸಿಂಗ್‌ ಯೂ, ಜಸ್ಟ್ ಟೆಲ್ಲಿಂಗ್ ಯೂ ಎಂದು ತ್ರಿವಿಕ್ರಮ್‌ ಪ್ರೀತಿ ಕುರಿತು ಹೇಳಿಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow