ವಿದ್ಯುತ್ ದರ ಏರಿಕೆ! ಗ್ರಾಹಕರ ಜೇಬಿಗೆ ಬರೆ, ಜಾರಿ ಯಾವಾಗಿನಿಂದ!

ಗ್ರಾಹಕರಿಗೆ ಬಿಗ್ ಶಾಕ್ ಕೊಡಲು ಮುಂದಾಗಿರುವ ಬೆಸ್ಕಾಂ, ಶೀಘ್ರವೇ ವಿದ್ಯುತ್ ದರ ಏರಿಕೆಗೆ ಮುಂದಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಪ್ರಮುಖವಾಗಿರುವ ಗೃಹಜ್ಯೋತಿ ಯೋಜನೆಯ ಲಾಭವನ್ನು ಹಲವು ಜನರು ಪಡೆದುಕೊಳ್ಳುತ್ತಿದ್ದು, ಹಲವರು ತಮ್ಮ ತಿಂಗಳ ಖರ್ಚಿನಲ್ಲಿ ವಿದ್ಯುತ್ ಬಿಲ್ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಮಧ್ಯಮ ವರ್ಗದ ಜನರು ಸೇರಿದಂತೆ ಬಡವರಿಗೆ ಸಾಕಷ್ಟು ಅನುಕೂಲವಾಗ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಇದರ ನಡುವೆಯೇ ಗ್ರಾಹರಿಗೆ ಶಾಕ್ ನೀಡಲು ವಿದ್ಯುತ್ ಎಸ್ಕಾಂ ಗಳು ಮುಂದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
2025-26 ರಲ್ಲಿ ಪ್ರತಿ ಯೂನಿಟ್ ಗೆ 67 ಪೈಸೆ, 2026-27 ರಲ್ಲಿ ಪ್ರತಿ ಯೂನಿಟ್ಗೆ 75 ಪೈಸೆ ಹಾಗೂ 2027-28 ರಲ್ಲಿ 91 ಪೈಸೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನ.30 ಕೊನೆಯ ದಿನವಾಗಿತ್ತು. ಆ ಗಡುವಿನೊಳಗೆ ಎಲ್ಲಾ ಎಸ್ಕಾಂಗಳು ಕೂಡ ದರ ಏರಿಕೆಗೆ ಪ್ರಸ್ತಾವನೆ ಕೊಟ್ಟಿವೆ.
ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ನವೆಂಬರ್ 30 ಕೊನೆ ದಿನವಾಗಿತ್ತು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಫೆಬ್ರುವರಿಯಲ್ಲಿ ಉದ್ಯಮಿಗಳು, ವ್ಯಾಪಾರಸ್ಥರು, ಸಾರ್ವಜನಿಕರು, ತಜ್ಞರ ಸಭೆ ನಡೆಸಲಿದ್ದು, ಅಹವಾಲು ಸ್ವೀಕಾರ ಮಾಡಲಿದೆ. ಬಳಿಕ ಸಾಧಕ ಸಾಧಕ ಗಳ ಪರಿಶೀಲನೆ ಮಾಡಿ, ಪರ ವಿರೋಧಗಳ ಆಲಿಕೆ ನಂತರ ಮಾರ್ಚ್ ತಿಂಗಳಲ್ಲಿ ದರ ಏರಿಕೆ ಬಗ್ಗೆ ಅಂತಿಮ ಆದೇಶ ಹೊರಡಿಸಲಿದ್ದು, ಏಪ್ರಿಲ್ 1 2025 ರಿಂದ ನೂತನ ದರ ಜಾರಿ ಬರುವ ಸಾಧ್ಯತೆಗಳಿವೆ.
ಮುಂದಿನ ಮೂರು ವರ್ಷಗಳ ಕಾಲ ಕ್ರಮವಾಗಿ ಪ್ರತಿ ಯುನಿಟ್ಗೆ 67 ಪೈಸೆ, 75 ಪೈಸೆ ಹಾಗೂ 91 ಪೈಸೆಯಂತೆ ದರ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬೆಸ್ಕಾಂ ಮನವಿ ಸಲ್ಲಿಸಿದೆ. ತನ್ನ ದರ ಪರಿಷ್ಕರಣೆಯ ಮನವಿ ಪ್ರಸ್ತಾವನೆಯಲ್ಲಿ ಮುಂದಿನ ವರ್ಷದಲ್ಲಿ (2025-26) ಬೆಸ್ಕಾಂಗೆ 2,572.69 ಕೋಟಿ ರು.ಗಳಷ್ಟು ಆದಾಯ ಕೊರತೆ ಉಂಟಾಗಲಿದೆ. ಇದನ್ನು ನೀಗಿಸಲು 2025ರ ಏ.1ರಿಂದ ಅನ್ವಯವಾಗುವಂತೆ 2025-26ರ ಸಾಲಿಗೆ ಪ್ರತಿ ಯುನಿಟ್ಗೆ 67 ಪೈಸೆಯಂತೆ ದರ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದೆ.
ಇನ್ನು 2026-27ನೇ ಆರ್ಥಿಕ ವರ್ಷದಲ್ಲಿ 3,018.95 ಕೋಟಿ ರೂ. ಆದಾಯ ಕೊರತೆ ಉಂಟಾಗಲಿದೆ. ಹೀಗಾಗಿ 2026-27ನೇ ಸಾಲಿಗೆ ಪ್ರತಿ ಯುನಿಟ್ ಗೆ 75 ಪೈಸೆ ದರ ಹೆಚ್ಚಳ ಮಾಡಬೇಕು. 2027-28ರಲ್ಲಿ 3,882.69 ಕೊರತೆ ಉಂಟಾಗಲಿದ್ದು, ಪ್ರತಿ ಯುನಿಟ್ಗೆ 91 ಪೈಸೆ ಪರಿಷ್ಕರಣೆ ಮಾಡಬೇಕು ಎಂದು ಬೆಸ್ಕಾಂ ಕೋರಿದೆ.
ನಿಮ್ಮ ಪ್ರತಿಕ್ರಿಯೆ ಏನು?






