ಪಾರ್ಟ್ ಟೈಮ್ ಕೆಲಸಕ್ಕೆ ಆಫರ್: ವಂಚಕರ ಮಾತು ಕೇಳಿ ಲಕ್ಷಾಂತರ ಹಣ ಕಳೆದುಕೊಂಡ ಬೆಂಗಳೂರು ಉದ್ಯೋಗಿ!

ಅಕ್ಟೋಬರ್ 9, 2025 - 22:01
 0  8
ಪಾರ್ಟ್ ಟೈಮ್ ಕೆಲಸಕ್ಕೆ ಆಫರ್: ವಂಚಕರ ಮಾತು ಕೇಳಿ ಲಕ್ಷಾಂತರ ಹಣ ಕಳೆದುಕೊಂಡ ಬೆಂಗಳೂರು ಉದ್ಯೋಗಿ!

ಬೆಂಗಳೂರು: ಅನೇಕರು ಮನೆಯಲ್ಲೇ ಕೂತು ಕೂತು ಬೋರಾಗುತ್ತಿದೆ. ಏನಾದ್ರು ಕೆಲಸ ಮಾಡಬೇಕು, ಮನೆಯಲ್ಲೇ ಕೂತು ಕೆಲಸ ಮಾಡಿ, ಹಣ ಸಂಪಾದಿಸುವ ಯಾವುದಾದ್ರು ಕೆಲಸ ಸಿಕ್ಕರೆ ಉತ್ತಮ. ಇದರಿಂದ ಮನೆಯಲ್ಲೇ ಕೂತು ಕೆಲಸವನ್ನು ಮಾಡಿ ಹಣವನ್ನು ಸಂಪಾದಿಸಬಹುದು. ಜೊತೆಗೆ ಸಮಯವನ್ನು ಕಳೆದಂತಾಗುತ್ತದೆ ಅಂತ ಅಂದುಕೊಳ್ಳುತ್ತಿರುತ್ತಾರೆ.

ಆದ್ರೆ ಹೀಗೆ ಅಂದುಕೊಂಡು ಗೊತ್ತು ಗುರಿಯಿಲ್ಲದವರ ಮಾತು ಕೇಳಿ, ವಾಟ್ಸಪ್, ಪೇಸಬುಕ್ ನಲ್ಲಿ ಬರೋ ಮೆಸೆಜ್ ಗಳನ್ನು ನೋಡಿ ಮಾಡಬಾರದ ಕೆಲಸ ಮಾಡಲು ಹೋದ್ರೆ ನೀವು ವಂಚಕರ (Online Fraud) ಬಲೆಗೆ ಬಿದ್ದು ಸಮಯದ ಜೊತೆಗೆ ನಿಮ್ಮ ಹಣವನ್ನು ಕಳೆದುಕೊಳ್ಳುತ್ತಿರಿ ಎಚ್ಚರ, ಎಚ್ಚರ.

ಹೌದು ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಟೆಲಿಗ್ರಾಮನಲ್ಲಿನ ಬಂದ ಪಾರ್ಟ್​ಟೈಮ್ ಕೆಲಸದ ಸಂದೇಶ ನಂಬಿ 67 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸತೀಶ್ ಕೆ (ಹೆಸರು ಬದಲಿಸಿದೆ) ಎಂಬ ಬೆಂಗಳೂರಿನ ನಿವಾಸಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆನ್ಲೈನ್ ಮೋಸದ ಜಾಲಕ್ಕೆ ಸಿಲುಕಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಜನವರಿ 11, 2025 ರಂದು 47 ವರ್ಷದ ಸತೀಶ್, ತಮ್ಮ ಟೆಲಿಗ್ರಾಂ ಸಂದೇಶವೊಂದರಲ್ಲಿ ಬಂದ ಲಿಂಕನ್ನು ಒತ್ತಿದಾಗ ‘ಆ್ಯಮಜಾನ್ ಇಂಡಿಯಾ ಪಾರ್ಟ್​ಟೈಮ್ ಬೆನಿಫಿಟ್ ಜಾಬ್’ಎಂಬ ಗ್ರೂಪ್​ಗೆ ಸೇರ್ಪಡೆಯಾಗಿದ್ದಾರೆ.

ಗ್ರೂಪಿಗೆ ಸೇರಿದ ನಂತರ ಅದರ ನಿರ್ವಾಹಕರಿಂದ ಇವರಿಗೆ ಸಾಲು ಸಾಲು ಸಂದೇಶಗಳು ಬಂದಿತ್ತು. ಆ ಸಂದೇಶಗಳಲ್ಲಿ ಆ್ಯಮಜಾನ್ ಉತ್ಪನ್ನಗಳ ವಿಮರ್ಶೆಯ ಮೂಲಕ ಹಣಗಳಿಸುವುದರ ಕುರಿತು ಮಾಹಿತಿಗಳಿತ್ತು. ಆದರೆ ಈ ಕೆಲಸ ಮಾಡಲು ಸತೀಶ್​ಗೆ ಹಣ ಪಾವತಿಸಿ ಕಮೀಶನ್ ಪಡೆಯುವಂತೆ ಹೇಳಿದ್ದಾರೆ.

ಮೊದಲಿಗೆ 1000 ರೂ. ಹೂಡಿಕೆ ಮಾಡಿದ ಸತೀಶ್​ಗೆ 1,650 ರೂ.ಮರುಪಾವತಿಸಲಾಗಿತ್ತು. ಈ ಆದಾಯವನ್ನು ನಂಬಿದ ಅವರು, ಇನ್ನೂ ಹಲವು ಬಾರಿ ಹೂಡಿಕೆ ಮಾಡಿದ್ದರು. ಕಾಲಕ್ರಮೇಣ ದೊಡ್ಡ ಮೊತ್ತದ ಹಣ ಪಾವತಿಸಿ ಹೆಚ್ಚು ಆದಾಯ ಪಡೆಯಬಹುದು ಎಂದು ಆಮಿಷವೊಡ್ಡಿ ಅವರನ್ನು ಇನ್ನಷ್ಟು ಹೂಡಿಕೆ ಮಾಡುವಂತೆ ಮಾಡಿದ್ದಾರೆ. ಮೋಸದ ಜಾಲಕ್ಕೆ ಸಿಲುಕಿದ್ದ ಸತೀಶ್, ಕೇವಲ 7 ತಿಂಗಳ ಅಂತರದಲ್ಲಿ ಬರೋಬ್ಬರಿ 67,63,950 ರೂ.ಗಳನ್ನು ಕಳೆದುಕೊಂಡಿದ್ದಾರೆ. ಎರಡು SBI ಖಾತಗಳು ಮತ್ತು ಒಂದು HDFC ಖಾತೆಗೆ ಹಣ ಕಳುಹಿಸಿದ ನಂತರ ಯಾವುದೇ ಆದಾಯ ಬರದೇ ಇದ್ದಾಗ ಸೈಬರ್ ಪೊಲೀಸರ ಮೊರೆ ಹೊಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow