ಮೆಟ್ರೋ ಪ್ರಯಾಣಿಕರೇ.. ಇದು ನಿಮ್ಮ ಗಮನಕ್ಕಿರಲಿ.. ಇಲ್ದಿದ್ರೆ ಬೀಳುತ್ತೆ ಭಾರೀ ದಂಡ!

ಆಗಸ್ಟ್ 19, 2025 - 22:02
 0  24
ಮೆಟ್ರೋ ಪ್ರಯಾಣಿಕರೇ.. ಇದು ನಿಮ್ಮ ಗಮನಕ್ಕಿರಲಿ.. ಇಲ್ದಿದ್ರೆ ಬೀಳುತ್ತೆ ಭಾರೀ ದಂಡ!

ಬೆಂಗಳೂರು:- ಇದು ನಗರದ ಮೆಟ್ರೋ ಪ್ರಯಾಣಿಕರು ನೋಡಲೇಬೇಕಾದ ಸುದ್ದಿ. ಇನ್ನೂ ಮುಂದೆ ರೈ ಲಲ್ಲಿ ಪ್ರಯಾಣಿಸುವಾಗ ಈ ತಪ್ಪು ಮಾಡಿದ್ರೆ ಬೀಳುತ್ತೆ ಭಾರೀ ದಂಡ.

ಎಸ್, ನಮ್ಮ ಮೆಟ್ರೋದಲ್ಲಿ ಕೊಂಡಯ್ಯುವ ಬ್ಯಾಗ್​ಗೂ ಶುಲ್ಕ ಪಾವತಿಸಿ ಟಿಕೆಟ್​ ಪಡೆಯಬೇಕು ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಹೌದು, ಓರ್ವ ಪ್ರಯಾಣಿಕ ತನ್ನ ದೊಡ್ಡ ಗಾತ್ರದ ಬ್ಯಾಗ್​ ಅನ್ನು ಮೆಟ್ರೋ ರೈಲಿನಲ್ಲಿ ಕೊಂಡೊಯ್ಯಲು 30 ರೂ. ಶುಲ್ಕ ಪಾವತಿ ಮಾಡಿದ್ದಾರೆ. ಈ ಕುರಿತು ಪ್ರಯಾಣಿಕ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಹಾಕಿ ಬಿಎಂಆರ್​ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕನ ಪೋಸ್ಟ್​
“ನಮ್ಮ ಮೆಟ್ರೋ ರೈಲಿನಲ್ಲಿ ಬ್ಯಾಗ್​ ಕೊಂಡೊಯ್ಯಲು 30 ರೂ. ಶುಲ್ಕ ಪಾವತಿಸಬೇಕು ಎಂದು ಕೇಳಿ ನಾನು ದಿಗ್ಬ್ರಾಂತ​ನಾದೆ. ಬೆಂಗಳೂರು ನಮ್ಮ ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ಬ್ಯಾಗ್​ಗೆ ಶುಲ್ಕ ಪಾವತಿ ಮಾಡುವುದು ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆಯಾಗುತ್ತದೆ. ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದನ್ನು ಬಿಎಂಆರ್​ಸಿಎಲ್ ಹೇಗೆ ತಡೆಯುತ್ತಿದೆ ಎಂಬುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ನಮ್ಮ ಮೆಟ್ರೋದಲ್ಲಿ ಒಬ್ಬ ವ್ಯಕ್ತಿ 60 ಸೆಂ.ಮೀ X 45 ಸೆಂ ಮೀ X 25 ಸೆಂ ಮೀ (ಉದ್ದ X ಅಗಲ X ಎತ್ತರ) 15 ಕೆಜಿ ಒಳಗಿನ ಬ್ಯಾಗ್​ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಒಂದು ವೇಳೆ ಪ್ರಯಾಣಿಕರು ಹೆಚ್ಚುವರಿ ಬ್ಯಾಗ್​ /ಹೆಚ್ಚುವರಿ ಬ್ಯಾಗ್​ ಮತ್ತು ದೊಡ್ಡ ಗಾತ್ರದ ಬ್ಯಾಗ್​ ಅನ್ನು ಕೊಂಡೊಯ್ಯಲು ಪ್ರತಿ ಬ್ಯಾಗ್​ಗೆ 30 ರೂ. ಶುಲ್ಕ ಪಾವತಿಸಿ ಟಿಕೆಟ್​ ಪಡೆಯಬೇಕು. ಈ ಲಗೇಜ್ ಟಿಕೆಟ್ ಅನ್ನು ಗ್ರಾಹಕ ಸೇವಾ ಕೇಂದ್ರದಲ್ಲಿ ಖರೀದಿಸಬಹುದು,” ಎಂದು ನಮ್ಮ ಮೆಟ್ರೋ ನಿಯಮಗಳಲ್ಲಿ ಇದೆ.

ಹೆಚ್ಚುವರಿ ಬ್ಯಾಗ್​ಗೆ ಟಿಕೆಟ್ ಖರೀದಿಸದಿದ್ದರೆ, ರೂ. 250 ದಂಡ ವಿಧಿಸಲಾಗುತ್ತದೆ. ಹೆಚ್ಚುವರಿ ಬ್ಯಾಗ್​ಗೆ ಶುಲ್ಕ ಪಾವತಿಸದೆ ಪ್ರಯಾಣಿಸುವಾಗ, ಮೆಟ್ರೋ ರೈಲ್ವೆ ಆಡಳಿತ ಮಂಡಳಿಯ ಯಾವುದೇ ಅಧಿಕಾರಿ ಆ ಪ್ರಯಾಣಿಕನನ್ನು ರೈಲಿನಿಂದ ಹೊರಗೆ ಕಳುಹಿಸುವ ಅಧಿಕಾರ ಹೊಂದಿದ್ದಾರೆ” ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow