ಮ್ಯಾಚ್ ಮಿಕ್ಸಿಂಗ್ ಆರೋಪದಲ್ಲಿ CSK: ಮ್ಯಾಚ್ ರೆಫರಿ ಕಿವಿಯಲ್ಲಿ ಧೋನಿ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ ದಿನೇ ದಿನೇ ರಂಗೇರುತ್ತಿದೆ. ಆದ್ರೆ, ಚಾಂಪಿಯನ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ನ ಆಟ ಪಂದ್ಯದಿಂದ ಪಂದ್ಯಕ್ಕೆ ಹೀನಾಯ ಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಇಡೀ ತಂಡ ಕಂಗೆಟ್ಟಿದೆ. ಅಭಿಮಾನಿಗಳನ್ನ ನೋವು, ಬೇಸರ, ಹತಾಶೆ ಆವರಿಸಿದೆ.
2025ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಸತತ ಸೋಲುಗಳಿಂದ ಕಂಗೆಟ್ಟಿತ್ತು. ಬಳಿಕ ಸೋಮವಾರ ನಡೆದ IPL ಪಂದ್ಯದಲ್ಲಿ ಲಕ್ನೋ ಎದುರು ಧೋನಿ ನಾಯಕತ್ವದ CSK ಗೆಲುವಿನ ಹಳಿಗೆ ಮರಳಿದೆ.
ಆದ್ರೆ, ಈ ಗೆಲುವಿನ ಬೆನ್ನಲ್ಲೇ ಚೆನ್ನೈ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಟಾಸ್ ವೇಳೆ ನಡೆದ ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ ಟಾಸ್ ವೇಳೆ ಧೋನಿ, ಮ್ಯಾಚ್ ರೆಫರಿ ಕಿವಿಯಲ್ಲಿ ತನ್ನ ನಿರ್ಧಾರ ತಿಳಿಸಿದ್ದರು.
ಅತ್ತ ಟಾಸ್ ಹೆಡ್ ಬೀಳುತ್ತಿದ್ದಂತೆ ಇತ್ತ ಕಡೆಯಿಂದ ಕಾಮೆಂಟೇಟರ್ ಮುರಳಿ ಕಾರ್ತಿಕ್, ಧೋನಿ ಆಯ್ಕೆ ಟೇಲ್ಸ್ ಅಲ್ವಾ ಎಂದು ಕೇಳಿದ್ದಾರೆ. ಆದರೆ ಮ್ಯಾಚ್ ರೆಫರಿ ಹೆಡ್ಸ್ ಎಂದಿದ್ದಾರೆ. ಇದೀಗ ಈ ಟಾಸ್ ಪ್ರಕ್ರಿಯೆ ವಿಡಿಯೋ ವೈರಲ್ ಆಗಿದ್ದು, ಅನೇಕರು ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






