ವೀಕ್ಷಕರಿಗೆ ಇನ್ಮುಂದೆ ಫುಲ್ ಮಜಾ : "ಮಜಾ ಟಾಕೀಸ್" ಬಳಗ ಸೇರಿದ ತುಕಾಲಿ, ಭಟ್ರು!

ಜನವರಿ 15, 2025 - 18:00
 0  14
ವೀಕ್ಷಕರಿಗೆ ಇನ್ಮುಂದೆ ಫುಲ್ ಮಜಾ : "ಮಜಾ ಟಾಕೀಸ್" ಬಳಗ ಸೇರಿದ ತುಕಾಲಿ, ಭಟ್ರು!

ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಮಜಾ ಟಾಕೀಸ್’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1ರಿಂದ ‘ಮಜಾ ಟಾಕೀಸ್’ ಆರಂಭ ಆಗಲಿದೆ. 

ಮಜಾ ಮಾಂಜಾ ಕೊಡೊಕೆ ಮಜಾ ಟಾಕೀಸ್ ಮತ್ತೆ ಬರ್ತಿದೆ. ಪ್ರೋಮೋ  ಮೂಲಕ ಮಜಾ ಟಾಕೀಸ್ ವಾಫಸ್ ಆಗ್ತಿರುವ ಬಗ್ಗೆ ಸುಳಿವನ್ನು ಕಲರ್ಸ್ ಕನ್ನಡ ಈ ಹಿಂದೆಯೇ ನೀಡಿತ್ತು. ಮೊದಲ ಪ್ರೋಮೊ ಬಿಡುಗಡೆ ಆಗ್ತಿದ್ದಂತೆ ವೀಕ್ಷಕರು ಈ ಬಾರಿ ಯಾರೆಲ್ಲ ಮಜಾ ಟೀಂನಲ್ಲಿ ಇರ್ತಾರೆ ಎಂಬ ಪ್ರಶ್ನೆ ಇಟ್ಟಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. 

ತುಕಾಲಿ ಸಂತೋಷ್, ಯೋಗರಾಜ್ ಭಟ್ ಮೊದಲಾದವರು ತಂಡ ಸೇರಿರೋದು ವಿಶೇಷ. ಈ ಮೊದಲನಿಂದಲೂ ಇದ್ದ ಕುರಿ ಪ್ರತಾಪ್ ಶೋನಲ್ಲಿ ಮುಂದುವರಿದಿದ್ದಾರೆ. 

ಈ ಮೊದಲು ‘ಮಜಾ ಟಾಕೀಸ್​’ನಲ್ಲಿ ಇಂದ್ರಜಿತ್ ಲಂಕೇಶ್ ಅವರು ವೇದಿಕೆ ಮೇಲೆ ಕುಳಿತಿರುತ್ತಿದ್ದರು. ಎಲ್ಲ ಜೋಕ್​ಗೆ ನಗೋದು ಅವರ ಕೆಲಸ ಆಗಿತ್ತು. ಅಲ್ಲದೆ, ಆಗಾಗ ಕಮೆಂಟ್​ಗಳನ್ನು ಕೂಡ ಪಾಸ್ ಮಾಡುತ್ತಿದ್ದರು. ಈ ಬಾರಿ ಆ ಜಾಗವನ್ನು ಯೋಗರಾಜ್ ಭಟ್ ತುಂಬುವ ಸೂಚನೆ ಸಿಕ್ಕಿದೆ. ಇದಲ್ಲದೆ ಪಾತ್ರವರ್ಗ ಕೂಡ ಹಿರಿದಾಗಿದೆ.

ಈ ಬಾರಿ ಮಜಾ ಟಾಕೀಸ್​ನಲ್ಲಿ ತುಕಾಲಿ ಸಂತೋಷ್, ಕುರಿ ಪ್ರತಾಪ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿ ಅನೇಕರು ಇರಲಿದ್ದಾರೆ. ಈ ಮೂಲಕ ಮನರಂಜನೆ ಕೂಡ ಡಬಲ್ ಆಗುವ ಸೂಚನೆ ಸಿಕ್ಕಿದೆ. ಈ ಬಾರಿ ಯಾವ ರೀತಿಯ ಸ್ಕ್ರಿಪ್ಟ್​ಗಳೊಂದಿಗೆ ಸೃಜನ್ ಬರುತ್ತಾರೆ ಎಂಬ ಕುತೂಹಲ ಇದೆ.

ಈ ಮೊದಲು ಮಜಾ ಟಾಕೀಸ್ ಪ್ರಸಾರ ಕಂಡಿತ್ತು. ಆದರೆ, ಕೆಲ ವರ್ಷಗಳಿಂದ ಸೃಜನ್ ಬ್ರೇಕ್ ಪಡೆದಿದ್ದರು. ಅವರು ಕಲರ್ಸ್ ಕನ್ನಡ ಶೋಗಳಲ್ಲಿ ಜಡ್ಜ್​ ಆಗಿ ಕಾಣಿಸಿಕೊಳ್ಳುತ್ತಾ ಇದ್ದರು. ಈಗ ಮಜಾ ಟಾಕೀಸ್​ಗೆ ಅವರು ಮರಳಿರೋದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow