ICC T20I Rankings: ಐಸಿಸಿ ಟಿ20 ಶ್ರೇಯಾಂಕ: ನಂಬರ್ 1 ಸ್ಥಾನಕ್ಕೇರಿದ ಆಂಗ್ಲ ಆಲ್‌ ರೌಂಡರ್!

ಸೆಪ್ಟೆಂಬರ್ 20, 2024 - 09:01
 0  11
ICC T20I Rankings: ಐಸಿಸಿ ಟಿ20 ಶ್ರೇಯಾಂಕ: ನಂಬರ್ 1 ಸ್ಥಾನಕ್ಕೇರಿದ ಆಂಗ್ಲ ಆಲ್‌ ರೌಂಡರ್!

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ವೇಳೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಮ್ಯಾಜಿಕ್ ಮಾಡಿದ್ದ ಇಂಗ್ಲೆಂಡ್​ನ ಸ್ಟಾರ್ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಆಲ್​ರೌಂಡರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಹೌದು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ 124 ರನ್ ಕಲೆಹಾಕಿದ್ದ ಲಿಯಾಮ್, ಬೌಲಿಂಗ್‌ನಲ್ಲಿ ಒಟ್ಟು 5 ವಿಕೆಟ್ ಪಡೆದಿದ್ದರು. ಹೀಗಾಗಿ ಐಸಿಸಿ ಟಿ20 ಶ್ರೇಯಾಂಕದಲ್ಲಿ ಬರೋಬ್ಬರಿ 7 ಸ್ಥಾನ ಜಿಗಿತ ಕಂಡಿರುವ ಅವರು 253 ರೇಟಿಂಗ್​ ಪಾಯಿಂಟ್​ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.

ಲಿವಿಂಗ್​ಸ್ಟೋನ್ ಅಗ್ರಸ್ಥಾನಕ್ಕೇರಿದ ಪರಿಣಾಮವಾಗಿ ಇದಕ್ಕೂ ಮುನ್ನ ನಂಬರ್ ಒನ್ ಸ್ಥಾನದಲ್ಲಿದ್ದ ಮಾರ್ಕಸ್ ಸ್ಟೊಯಿನಿಸ್ ಇದೀಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ದೊಡ್ಡ ಸಂಗತಿಯೆಂದರೆ ಮೊದಲ ಸ್ಥಾನದಲ್ಲಿರುವ ಲಿವಿಂಗ್‌ಸ್ಟೋನ್ ಅವರ ರೇಟಿಂಗ್​ ಪಾಯಿಂಟ್ 253 ಇದ್ದರೆ, ಎರಡನೇ ಸ್ಥಾನದಲ್ಲಿರುವ ಮಾರ್ಕಸ್ ಸ್ಟೊಯಿನಿಸ್ ಅವರ ರೇಟಿಂಗ್​ ಪಾಯಿಂಟ್ 211 ಆಗಿದೆ. ಮಾರ್ಕಸ್ ಸ್ಟೊಯಿನಿಸ್ ಹೊರತುಪಡಿಸಿ, ಜಿಂಬಾಬ್ವೆಯ ಸಿಕಂದರ್ ರಾಝಾ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಶ್ರೀಲಂಕಾದ ವನಿಂದು ಹಸರಂಗಾ ಮತ್ತು ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ತಲಾ ಒಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತದ ಹಾರ್ದಿಕ್ ಪಾಂಡ್ಯ ಮತ್ತು ನೇಪಾಳದ ದೀಪೇಂದ್ರ ಐರಿ ಕೂಡ ಒಂದು ಸ್ಥಾನ ಕುಸಿದಿದ್ದಾರೆ.

 ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow