Rohit Sharma: ತಡರಾತ್ರಿ ಆಸ್ಪತ್ರೆಗೆ ತೆರಳಿದ ರೋಹಿತ್ ಶರ್ಮಾ, ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

ಸೆಪ್ಟೆಂಬರ್ 10, 2025 - 09:01
 0  12
Rohit Sharma: ತಡರಾತ್ರಿ ಆಸ್ಪತ್ರೆಗೆ ತೆರಳಿದ ರೋಹಿತ್ ಶರ್ಮಾ, ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಗೆ ಪ್ರವೇಶಿಸುತ್ತಿರುವ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

ಆಸ್ಪತ್ರೆಗೆ ಭೇಟಿ ನೀಡಲು ಕಾರಣವನ್ನು ರೋಹಿತ್ ಶರ್ಮಾ ಅಥವಾ ಅವರ ಕುಟುಂಬ ಇನ್ನೂ ಬಹಿರಂಗಪಡಿಸಿಲ್ಲ. ಇದರಿಂದ, ಅಭಿಮಾನಿಗಳು ವಿವಿಧ ಅಂದಾಜುಗಳನ್ನು ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಹಿಟ್ಮ್ಯಾನ್ ಬೇಗ ಗುಣಮುಖರಾಗಲಿಎಂದು ಹಾರೈಸುತ್ತಿದ್ದಾರೆ.

ಮುಂದಿನ ತಿಂಗಳು ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ನಡೆಯಲಿದ್ದು, ಅದಕ್ಕಾಗಿ ರೋಹಿತ್ ಶರ್ಮಾ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆದ ಫಿಟ್ನೆಸ್ ಟೆಸ್ಟ್ನನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು.

ವರ್ಷದ ಮೇ ತಿಂಗಳಲ್ಲಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. 2027 ಏಕದಿನ ವಿಶ್ವಕಪ್ವರೆಗೆ ಭಾರತ ಪರ ಆಡುವ ಗುರಿ ಹೊಂದಿರುವ ರೋಹಿತ್, ಪ್ರಸ್ತುತ ಏಕದಿನ ಮತ್ತು ಟಿ20 ಫಾರ್ಮ್ಯಾಟ್ಗಳ ಮೇಲೆ ಮಾತ್ರ ಗಮನ ಕೆಂದ್ರೀಕರಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow