ಶುಭ್​ಮನ್ ಗೆ ನಿರಾಸೆ: ಶತಕದಂಚಿನಲ್ಲಿ ಎಡವಿದ ಗಿಲ್!

ನವೆಂಬರ್ 3, 2024 - 22:33
 0  10
ಶುಭ್​ಮನ್ ಗೆ ನಿರಾಸೆ: ಶತಕದಂಚಿನಲ್ಲಿ ಎಡವಿದ ಗಿಲ್!

ಟೀಮ್ ಇಂಡಿಯಾದ ಆಟಗಾರ ಶುಭ್​ಮನ್ ಗಿಲ್ ಗೆ ಭಾರಿ ನಿರಾಸೆ ಆಗಿದ್ದು, ಶತಕದಂಚಿನಲ್ಲಿ ಎಡವಿದ್ದಾರೆ. 

ನ್ಯೂಝಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಶತಕದಂಚಿನಲ್ಲಿ ಎಡವಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಆದರೆ 144 ಎಸೆತಗಳಲ್ಲಿ 4 ಫೋರ್, 1 ಸಿಕ್ಸ್​ನೊಂದಿಗೆ 90 ರನ್ ಬಾರಿಸಿ ಶತಕದತ್ತ ದಾಪುಗಾಲಿಟ್ಟಿದ್ದ ಗಿಲ್, ಎಜಾಝ್ ಪಟೇಲ್ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಡೇರಿಲ್ ಮಿಚೆಲ್​ಗೆ ಕ್ಯಾಚ್ ನೀಡಿದರು. ಈ ಮೂಲಕ ಕೇವಲ 10 ರನ್​ಗಳಿಂದ ಶತಕ ವಂಚಿತರಾದರು.

ಇದಕ್ಕೂ ಮುನ್ನ ಶುಭ್​ಮನ್ ಗಿಲ್ ಟೆಸ್ಟ್ ಕ್ರಿಕೆಟ್​ನಲ್ಲಿ 5 ಬಾರಿ ಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ್ ಹಾಗೂ ಇಂಗ್ಲೆಂಡ್ ವಿರುದ್ಧ ತಲಾ 2 ಶತಕ ಸಿಡಿಸಿದ್ದ ಗಿಲ್, ಆಸ್ಟ್ರೇಲಿಯಾ ವಿರುದ್ಧ 1 ಸೆಂಚುರಿ ಸಿಡಿಸಿದ್ದರು. ಇದೀಗ ನ್ಯೂಝಿಲೆಂಡ್ ವಿರುದ್ಧ ಚೊಚ್ಚಲ ಶತಕ ಬಾರಿಸುವ ಅವಕಾಶ ಹೊಂದಿದ್ದ ಗಿಲ್ ಕೇವಲ ಹತ್ತು ರನ್​ಗಳಿಂದ ಮೂರಂಕಿ ಮೊತ್ತವನ್ನು ತಪ್ಪಿಸಿಕೊಂಡರು.

ಇನ್ನು ಶುಭ್​ಮನ್ ಗಿಲ್ ಅವರ 90 ರನ್​ಗಳ ನೆರವಿನಿಂದ ಟೀಮ್ ಇಂಡಿಯಾ 2ನೇ ದಿನದಾಟದ 2ನೇ ಸೆಷನ್​ನಲ್ಲಿ 200 ರನ್ ಕಲೆಹಾಕಿತು. ಆದರೆ ಗಿಲ್ ಬಳಿಕ ಬಂದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಅಂತಿಮವಾಗಿ ಟೀಮ್ ಇಂಡಿಯಾ 263 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 28 ರನ್​ಗಳ ಮುನ್ನಡೆ ಪಡೆದುಕೊಂಡಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow